ಸಹ ಪಯಣ

ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ಈ ಸಹಪಯಣ. ಗಣರಾಜ್ಯೋತ್ಸವ ದಿನವಾದ
26 ಜನವರಿ 2015 ರಿಂದ ಪ್ರಾರಂಭವಾಗಿದೆ.


 • ನಮ್ಮ ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳು ಎಲ್ಲ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುತ್ತಿದ್ದರೂ ಅವರನ್ನು ಗುರುತಿಸುವ ಮತ್ತು ಅವರನ್ನು ಸಮಾನವಾಗಿ ಪರಿಗಣಿಸುವ ಮನೋಭಾವ ಇನ್ನೂ ಸಮಾಜಕ್ಕೆ ಬಂದಿಲ್ಲ. ಇಂದಿಗೂ ಎಲ್ಲ ಕ್ಷೇತ್ರದ ಬಹು ಮುಖ್ಯ ಹಿಡಿತಗಳು ಗಂಡಿನ ಕೈಯಲ್ಲೇ ಇವೆ ಎಂಬುದು ಗಮನಾರ್ಹವಾದುದು. ಈ ಕುರಿತು ಡೇವಿಡ್‍ ಲಿಯೋನ್‍ಹಾರ್ಟ್‌ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಬರೆದ ಲೇಖನದ ಕನ್ನಡಾನುವಾದವನ್ನು 9 ಜೂನ್ 2018ರ ಪ್ರಜಾವಾಣಿಯ ವಿಶ್ಲೇಷಣೆ ಅಂಕಣದಲ್ಲಿ ಪ್ರಕಟಿಸಲಾಗಿದೆ. ಈ ವಿಷಯದಲ್ಲಿ ನಮ್ಮ ಸಹಮತದೊಡನೆ ಸಹಪಯಣ …


  ಮುಂದೆ ನೋಡಿ
 • 19.5.2018ರ ಪ್ರಜಾವಾಣಿ ಮುಕ್ತಛಂದ ಪುರವಣಿಯಲ್ಲಿ, ರೈತ ಹೋರಾಟಗಾರರಾದ ದಿವಂಗತ ಕೆ.ಎಸ್.ಪುಟ್ಟಣಯ್ಯ ಅವರ ಕುರಿತು ತಯಾರಾಗಿರುವ ಸಾಕ್ಷ್ಯಚಿತ್ರದ ಪರಿಚಯಾತ್ಮಕ ಬರಹ … ನಮ್ಮ ಸಹಪಯಣಕ್ಕಾಗಿ …


  ಮುಂದೆ ನೋಡಿ
 • ಶತಾಯುಷಿಗಳಾದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭ್ರಷ್ಟಾಚಾರ-ವಿರೋಧಿ ಹೋರಾಟಗಾರರಾದ ಶ್ರೀ ಎಚ್.ಎಸ್. ದೊರೆಸ್ವಾಮಿ ಅವರು ಸ್ವರಾಜ್ ಇಂಡಿಯಾ ಕರ್ನಾಟಕದ ಪ್ರಣಾಳಿಕೆಯನ್ನು 3 ಮೇ 2018ರಂದು ಬೆಂಗಳೂರಿನ ಜಯನಗರದಲ್ಲಿನ ಅವರ ಮನೆಯಲ್ಲಿ ‘ಸಮುದಾಯದ ಪ್ರಣಾಳಿಕೆ’ ಎಂದು ಘೋಷಿಸಿ ಬಿಡುಗಡೆ ಮಾಡಿದರು. ಪೂರ್ಣ ಪ್ರಣಾಳಿಕೆ ಇಲ್ಲಿದೆ. ಇದು ಮನುಷ್ಯ ಬದುಕಿನ ಆತ್ಯಂತಿಕ ಅವಶ್ಯಕತೆಗಳನ್ನು ಕುರಿತು ಆಳದ ಒಳನೋಟಗಳಿಂದ ಚಿಂತಿಸಿರುವುದರಿಂದ ಮತ್ತು ಆರ್ದ್ರತೆಯಿಂದ ಸಕಲ ಜೀವ ಪರವಾಗಿ ಮಿಡಿದಿರುವುದರಿಂದ…. ಇದರೊಂದಿಗೆ ನಮ್ಮ ಸಹಪಯಣ…
  ನಮ್ಮ ಬನವಾಸಿಗರು


  ಮುಂದೆ ನೋಡಿ
 • 14.3.2018 ರಂದು ನಮ್ಮನ್ನಗಲಿದ ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಕುರಿತು ನಾಗೇಶ್ ಹೆಗಡೆ ಅವರು ಪ್ರಜಾವಾಣಿಗೆ ಬರೆದ ಲೇಖನದ ಪ್ರತಿ ಇಲ್ಲಿದೆ. ನಮ್ಮ ಬನವಾಸಿಯು ಈ ಮೂಲಕ ಅಗಲಿದ ಮಹಾನ್ ಚೇತನಕ್ಕೆ ಶ್ರದ್ದಾಂಜಲಿ ಸಲ್ಲಿಸುತ್ತದೆ.


  ಮುಂದೆ ನೋಡಿ
 • 8 ಮಾರ್ಚ್ 2018ರಂದು ಶಿವಮೊಗ್ಗೆಯಲ್ಲಿ ನಡೆದ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಮೊದಲ ವಿಚಾರಸಂಕಿರಣದಲ್ಲಿ, ಫ್ಲೇವಿಯಾ ಆಗ್ನೇಸ್ ಮತ್ತು ಮನಿಷಾ ಗುಪ್ತೆಯವರ ಸಮ್ಮುಖದಲ್ಲಿ ಕವಯಿತ್ರಿ ಪ್ರೊ.ಸ.ಉಷಾ ಅವರು ಉದ್ಘಾಟನಾ ಭಾಷಣದಲ್ಲಿ ಆಡಿದ ಮಾತುಗಳ ಪೂರ್ಣಪಾಠ


  ಮುಂದೆ ನೋಡಿ
 • ಮಾರ್ಚ್ 5, 2018ರ ತಮ್ಮ ಪ್ರಜಾವಾಣಿಯ ದೆಹಲಿ ನೋಟ ಅಂಕಣದಲ್ಲಿ -ಡಿ.ಉಮಾಪತಿಯವರು ಬಿಹಾರದ ಮುಜಫರ್ ಜಿಲ್ಲೆಯ ಚತುರ್ಭುಜಸ್ತಾನ ಎಂಬಲ್ಲಿನ ವೇಶ್ಯಾವಾಟಿಕೆಯ ಕುರಿತು ಬರೆಯುತ್ತ ಆ ಪ್ರವಾಹಕ್ಕೆ ಎದುರಾಗಿ ಈಜಿ ‘ಪರ್ಛಮ್’ ಮತ್ತು ‘ಜುಗ್ನು’ವನ್ನು ಹುಟ್ಟು ಹಾಕಿದ್ದ ನಸೀಮಾ ಖಾತೂನ್ ಎಂಬ ದಿಟ್ಟ ಯುವತಿಯ ಕಥೆಯನ್ನು ಮನಮುಟ್ಟುವಂತೆ ಬರೆದಿದ್ದಾರೆ. ನಮ್ಮ ಮರು ಓದಿಗಾಗಿ …


  ಮುಂದೆ ನೋಡಿ
 • ಕಾಡಿನ ಜೀವಗಳಿಗಾಗಿ, ಸಾಕು ಪ್ರಾಣಿಗಳಿಗಾಗಿ ಈ ಅಜ್ಜ ಏಳು ಕೆರೆಗಳನ್ನು ಕಟ್ಟಿಸಿದ್ದಾರೆ; ಸ್ವಂತ ಕುರಿಗಳನ್ನೇ ಮಾರಿ! ಕಾಮೇಗೌಡರ ಈ ಕೆರೆ ಪುರಾಣವನ್ನು 6.3.2018ರ ಪ್ರಜಾವಾಣಿ ಕರ್ನಾಟಕ ದರ್ಶನ ಪುರವಣಿಯಲ್ಲಿ ಅಶೋಕ ಉಚ್ಛಂಗಿಯವರು ಮನ ಮುಟ್ಟುವಂತೆ ಬರೆದಿದ್ದಾರೆ.

  6 Mar, 2018


  ಮುಂದೆ ನೋಡಿ
 • ಅಸಹಾಯಕ ಬಡ ಮಹಿಳೆಯರು, ವಿಧವೆಯರು, ವಿಚ್ಛೇದಿತರನ್ನು ‘ಆಶಾ’ಗಳಾಗಿ ನೇಮಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲಾಗುತ್ತದೆ ಎನ್ನುವುದು ಸರ್ಕಾರದ ಘೋಷಣೆ. ಆದರೆ, ಆಶಾಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲ ಎಂಬುದು ವಾಸ್ತವ. ಈ ಕುರಿತು 8, ಮಾರ್ಚ್ 2018 ರಂದು ಪ್ರಜಾವಾಣಿಯ ‘ನಾರೀಪಥ’ ವಿಶೇಷ ಪುರವಣಿಯಲ್ಲಿ ರಾಜೇಶ್ ರೈ ಚಟ್ಲ ಅವರು ವಿವರವಾದ ಲೇಖನವನ್ನು ಬರೆದಿದ್ದಾರೆ. ಅದು ನಮ್ಮ ಮರು ಓದಿಗಾಗಿ …


  ಮುಂದೆ ನೋಡಿ
 • 18.2.2018 ರಂದು ಪುಟ್ಟಣ್ಣಯ್ಯ ಅವರು ನಿಧನರಾದ ಸಂದರ್ಭದಲ್ಲಿ ಚುಕ್ಕಿ ನಂಜುಂಡಸ್ವಾಮಿಯವರು ಬರೆದ ಆಪ್ತ ಬರಹ thestate.news ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ನಮ್ಮ ಮರು ಓದಿಗಾಗಿ….


  ಮುಂದೆ ನೋಡಿ
 • 23.2.2018ರಂದು ಖ್ಯಾತ ಚಿಂತಕಿ, ಸಾಹಿತಿ,ಮಹಿಳಾಪರ ಹೋರಾಟಗಾರ್ತಿ ವಿಜಯಾದಬ್ಬೆಯವರ ನಿಧನರಾದರು. ಆ ಸಂದರ್ಭದಲ್ಲಿ thestate.news ಆನ್ ಲೈನ್ ಪತ್ರಿಕೆಯಲ್ಲಿ ರೂಪ ಹಾಸನ ಅವರು ಬರೆದ ಲೇಖನ.


  ಮುಂದೆ ನೋಡಿ