ಪತ್ರಿಕಾ ಪ್ರಕಟಣೆ 09.09.2018-ದೇವನೂರ ಮಹಾದೇವ

                                                                                                       Swaraj India, Karnataka

                                                                                                   ಸ್ವರಾಜ್ ಇಂಡಿಯಾ ಕರ್ನಾಟಕ

[ಅಷ್ಟಪಥ ರಸ್ತೆಯ, ಸೇಲಂ-ಚೆನ್ನೈ ಕಾರಿಡಾರ್ ಯೋಜನೆಯ ಸಂತ್ರಸ್ತ ರೈತರನ್ನು 8.9.2018 ರಂದು ಭೇಟಿ ಮಾಡಲು ತೆರಳಿದ್ದ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷರಾದ ಯೋಗೇಂದ್ರ ಯಾದವ್ ಮತ್ತವರ ಸಹಚರರನ್ನು   ಪೊಲೀಸರು ಬಂಧಿಸಿದ್ದನ್ನು ಖಂಡಿಸಿ, ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ  ಸದಸ್ಯರಾದ ದೇವನೂರ ಮಹಾದೇವ ಅವರು 9.9.2018 ರಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ. ]

ಪತ್ರಿಕಾ ಪ್ರಕಟಣೆ

09.09.2018

ನಮ್ಮ ಸಮುದಾಯದ ಗ್ರಹಿಕೆಯಿಂದ ಈ ಕೆಲವು ಮಾತುಗಳನ್ನಾಡುತ್ತಿರುವೆ. ಒಬ್ಬ ಕೊಲೆಗಾರ ನೇರವಾಗಿ ಕೊಲೆ ಮಾಡುವುದಕ್ಕೆ ಬಂದರೆ ಅದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಅದನ್ನ ಪ್ರತಿಭಟಿಸಲೂಬಹುದು. ಆದರೆ ಅದೇ ಕೊಲೆಗಾರ ಮಾರುವೇಷದಲಿದ್ದರೆ ತಪ್ಪಿಸಿಕೊಳ್ಳೋಕೆ ಕಷ್ಟ ಆಗುತ್ತೆ. ಈಗ ಇಂಥದೇ ಪರಿಸ್ಥಿತಿ ಅನುಭವಿಸುತ್ತಿದ್ದೇವೆ. ಈ ಹಿಂದೆ ಇಂದಿರಾಗಾಂಧಿ ಅವರು ಜಾರಿ ಮಾಡಿದ ತುರ್ತುಪರಿಸ್ಥಿತಿ ನೇರವಾಗಿತ್ತು. ಅದು ಕಾಣುವಂತೆ ಇತ್ತು. ಅದರಿಂದ ಅದನ್ನ ಪ್ರತಿಭಟಿಸಬಹುದಾಗಿತ್ತು. ಅದರ ಎದುರು ಸಂಘಟನೆ ಮಾಡಬಹುದಾಗಿತ್ತು. ಅದರಿಂದ ಬೇಗ ಹೊರಬರುವ ಸಾಧ್ಯತೆ ಹೆಚ್ಚಾಗಿತ್ತು. ಈಗ ಇರೋದು ಕೂಡ ತುರ್ತುಪರಿಸ್ಥಿತಿನೇ. ಹೆಸರಿಲ್ಲ ಅಷ್ಟೇ. ಇದು ಮಾರುವೇಷದ ತುರ್ತುಪರಿಸ್ಥಿತಿ. ಇದನ್ನ ‘ಗೋಮುಖ ವ್ಯಾಘ್ರ ತುರ್ತುಪರಿಸ್ಥಿತಿ’ ಅಂತ ಕರೆಯಬಹುದು. ಈ ‘ಗೋಮುಖ ವ್ಯಾಘ್ರ ತುರ್ತುಪರಿಸ್ಥಿತಿ’ಯ ಲಕ್ಷಣವನ್ನು ದೇಶದ ಉದ್ದಗಲಕ್ಕೂ ಇಂದು ಕಾಣುತ್ತಿದ್ದೇವೆ. ಇದಕ್ಕೆ expressway ಒಂದು ಉದಾಹರಣೆ ಅಷ್ಟೇ. ಕಾನೂನನ್ನು ಭಂಗಮಾಡದೇ ನೊಂದವರನ್ನ ಭೇಟಿ ಮಾಡಬೇಕೆಂದ ಯೋಗೇಂದ್ರ ಯಾದವ್, ಲಿಂಗರಾಜು ಮತ್ತು ಬಾಲಕೃಷ್ಣನ್ ಅವರಿಗೆ ಅವಕಾಶ ಕೊಡಲಿಲ್ಲ ಅಂದರೆ ಅರ್ಥ ಏನು? ಇದು ‘ಗೋಮುಖ ವ್ಯಾಘ್ರ ತುರ್ತುಪರಿಸ್ಥಿತಿ’ಯಲ್ಲವೇ?

ಈಗ ಚೆನ್ನೈ- ಸೇಲಂ expressway ಅನಿವಾರ್ಯವಿತ್ತಾ ಎಂದು ನಾವು ಯೋಚಿಸಬೇಕಾಗಿದೆ. ಈಗಾಗಲೇ ಚೆನ್ನೈಯಿಂದ ಸೇಲಂಗೆ ಮೂರು ರಸ್ತೆಗಳು ಇವೆ. ಈ ರೀತಿ ಇರುವಾಗ ಇನ್ನೊಂದು ರಸ್ತೆ ಬೇಕಾಗಿತ್ತಾ? ಈ ಪ್ರಶ್ನೆಯನ್ನು ನಾವು ಎತ್ತಬೇಕಾಗಿದೆ. ಈ ಹೊಸ ಯೋಜನೆಯನ್ನು ಕೈಗೊಂಡರೆ ರಸ್ತೆಯ ಮಾರ್ಗದಲ್ಲಿ ಹನ್ನೊಂದು reserved forest ಬರುವುದರಿಂದ ಸಾವಿರಾರು ಮರಗಳು ಧ್ವಂಸವಾಗುತ್ತವೆ. ಕಾಡನ್ನು ಧ್ವಂಸ ಮಾಡಿ ರಸ್ತೆ ಮಾಡೋದು ವಿನಾಶ ಅಲ್ಲವೇ? ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ! ಜೊತೆಗೆ ಭೂಮಿ ಕಳೆದುಕೊಳ್ಳುವ ರೈತರ ಒಪ್ಪಿಗೆನೂ ಇಲ್ಲ. ಕೇಂದ್ರ ಸರಕಾರ ದಬ್ಬಾಳಿಕೆಯಿಂದ ಈ ಯೋಜನೆಯನ್ನು ಮಾಡಲು ಹೊರಟಿದೆ.

ಇದರ ಮರ್ಮವೇನು? ಈ ಹಿನ್ನಲೆಯಲ್ಲಿ ನೋಡುವಾಗ 10000 ಕೋಟಿ ಬಜೆಟ್ ನ ಈ ರಸ್ತೆ ಮಾಡುವ ಯೋಜನೆಯಲ್ಲಿ commission ಡೀಲ್ ಹಾಗೂ ಕಾಡು ನಾಶ ಮಾಡಿ ಟಿಂಬರ್ ವ್ಯವಹಾರ ಮಾಡುವ ಸಂಚಿನ ವಾಸನೆ ಇದೆ. ಎಲ್ಲಿಂದಲೋ ಸಾಲ ತಂದು, ಕಮಿಷನ್ ಹೊಡ್ಕೊಂಡು, ರಸ್ತೆ ಮಾಡಿಕೊಂಡು, ಅರಣ್ಯ ಸಂಪತ್ತನ್ನೂ ನಾಶಮಾಡಿ ಜನಸಾಮಾನ್ಯರ ಮೇಲೆ ಸಾಲದ ಹೊರೆಯನ್ನು ಹಾಕುವುದೇ ಇಂದು ಅಭಿವೃದ್ಧಿ ಅನ್ನಿಸಿಕೊಂಡಿದೆ. ಇಂತಹ ಅಭಿವೃದ್ಧಿ ಕಾರಣಕ್ಕಾಗಿಯೇನೇ ಮೇಘಸ್ಫೋಟ ಸುನಾಮಿ ಸಂಭವಿಸುತ್ತಿವೆ. ಈ ಮೇಘಸ್ಫೋಟ ಸುನಾಮಿ ಕಾರಣಕ್ಕಾಗಿಯೇ ಕೇರಳ ಮತ್ತು ಕೊಡಗಿನಲ್ಲಿ ಮಾಡಿದ so called ಅಭಿವೃದ್ಧಿ ರಸ್ತೆಗಳು ಕೊಚ್ಚಿಕೊಂಡು ನಮ್ಮ ಕಣ್ಮುಂದೆಯೇ ಹೋಗಿವೆ. ಆದರೂ ನಮಗೆ ಬುದ್ಧಿ ಬಂದಿಲ್ಲ. ಈಗಲಾದರೂ ಕೇಂದ್ರ ಸರಕಾರ ಕಷ್ಟ ಪಟ್ಟುಕೊಂಡು ವಿವೇಕ ವಿವೇಚನೆ ಪಡೆದುಕೊಂಡು ಈ ದುರಂತ ಯೋಜನೆಯನ್ನು ಕೈಬಿಡಬೇಕಾಗಿದೆ.

I’m going to say a few words based on our community’s understanding – if a murderer comes to kill you openly, the possibility of escaping is high. It can even perhaps be fought against. But if the same killer is in disguise, it would be difficult to get away.

 Now we are experiencing a similar situation. The emergency that Indira Gandhi had brought into force was straightforward. It was visible. So we could protest it. We could organise against it. What we have now is also an emergency. It’s just not being called by that name. This is an emergency in disguise. This could be called the ‘Cow-faced Tiger Emergency’. The symptoms of this ‘Cow-faced Tiger Emergency’ is being seen throughout the country today.

 The Chennai-Salem expressway is one example of it. What does it mean to have not allowed Yogendra Yadav, Lingaraju and Balakrishnan, who were not violating any laws? The government did not even allow them to meet those who were affected. Are we living in a democratic country? That’s why I said that this is a ‘Cow-faced Tiger Emergency’?

 We now have to think about whether the Chennai-Salem Expressway was inevitable. Salem and Chennai are already connected by three roads. When this is the case do is there a need for another road? We have to raise this question. If this new project is undertaken, thousands of trees in the eleven reserved forests that fall in its path will be destroyed. Isn’t it absolute devastation to destroy the forests to build a road? The High Court has passed a stay order. But it does not even count! There is also no consent from the farmers who are set to lose their lands. The central government has set out to do this project tyrannically.

 What is at the heart of this? When seen in the light of this background, there is present the stench of a conspiracy of commission deals on the 10,000 crore budgeted road making project and the business of timber from the destroyed forests. Getting loans from somewhere, making commission deals, making roads, destroying the wealth of the forests and burdening common people with this debt is what is being called development today. It is because of such development that cloudburst tsunamis are happening. It’s because of these cloudburst tsunamis that so called ‘developed’ roads have been washed away in Kerala and in Kodagu right in front of our very own eyes. But we have still not learned. Even now the central government should become wiser and let go of this tragic project.

 Devanoora Mahadeva