ಕವಿ ಕೆ.ಬಿ. ಸಿದ್ಧಯ್ಯ ಅವರ ‘ಬಕಾಲ’ ಕವನ ಸಂಕಲನದ ಬೆನ್ನುಡಿ

[ಕವಿ ಕೆ.ಬಿ. ಸಿದ್ಧಯ್ಯ ಅವರ ‘ಬಕಾಲ’ ಕವನ ಸಂಕಲನಕ್ಕೆ ದೇವನೂರ ಮಹಾದೇವ ಅವರ ಬೆನ್ನುಡಿ, ನಮ್ಮ ಮರು ಓದಿಗಾಗಿ… 
‘ಬಕಾಲ’ ಸಂಕಲನದ ಮೇಲ್ಮೈ ಪುಟಗಳನ್ನು ಕಳಿಸಿ ಕೊಟ್ಟ ಪತ್ರಕರ್ತ ಉಗಮ ಶ್ರೀನಿವಾಸ್ ಅವರಿಗೆ ವಂದನೆಗಳು.]

bakala

bakala 1

 

 

ಹೊರಗೆ ಐಲು ಪೈಲಿನಂತೆ ಒಳಗೆ ತುಂಬಾ ಸಂತನಂತೆ ಗೋಚರಿಸುವ ನಮ್ಮ ಕೇಬಿಯ ಆತ್ಮ ಬಕಾಲದ ಮೂಲಕ ನುಡಿಕೊಟ್ಟಿದೆ. 

ದಕ್ಕದ ಮಹಾಮುನಿಯನ್ನು ದಕ್ಕಿಸಿಕೊಳ್ಳುವ ಮಹತ್ವಾಕಾಂಕ್ಷೆಗೆ ತಕ್ಕಾಗಿ ಕೇಬಿಯ ಧ್ಯಾನದ ಸ್ತರದಲ್ಲಿ ಪರಿಭಾವಿಸಿ ರೂಪಕದ ಪ್ರತಿಭೆಯೊಡನೆ ಸೆಣೆಸಿದ್ದಾನೆ. ಇದು ಸೋಲೋ ಗೆಲುವೋ ಎಂಥದೋ . ಈ ಪ್ರಯತ್ನವೇ ಅಸಾಧಾರಣವಾದುದಾಗಿದೆ. ಹಾಗೂ ಸತ್ವಯುತ ಸೃಷ್ಟಿಕರ್ತನೊಬ್ಬನ ಹುಟ್ಟನ್ನು ಹೇಳುತ್ತದೆ.