ಡಾ.ಎಲ್.ಬಸವರಾಜು ಅವರ ಲಯಾಕಾರ ವಿನ್ಯಾಸದ “ಕುಸುಮಬಾಲೆ”

ಪಿಡಿಎಫ್ ಪ್ರತಿ ಡೌನ್‌ಲೋಡ್ ಮಾಡಿ

l.basavaraj

[ಡಾ.ಎಲ್.ಬಸವರಾಜು ಅವರ ಲಯಾಕಾರ ವಿನ್ಯಾಸದ  “ಕುಸುಮಬಾಲೆ” ಓದಿಗಾಗಿ  ಕೊಂಡಿ ಅನುಸರಿಸಿ…. ]

ಕುಸುಮಬಾಲೆ
ದೇವನೂರ ಮಹಾದೇವ
ಲಯಾಕಾರ ವಿನ್ಯಾಸ: ಡಾ. ಎಲ್.ಬಸವರಾಜು

ಹೀಗೆ…

ಅಕ್ಕಮಹಾದೇವಮ್ಮನು ಗಂಡನ ತಿಥಿಯಾದ ಮಾರನೆಗೇ ತನ್ನ  ತೌರಿಗೆ ಹೋದವಳು ಆರುವರುಷದ ಬಳಿಕ, ಅಪ್ಪ ಸತ್ತ ಹನ್ನೇಡು ತಿಂಗಳಿಗೆ ಹಟ್ಟಿ ಜೀತಗಾರನಿಗೆ ಹುಟ್ಟಿದವನೆಂಬ ಅಪವಾದದ ತನ್ನ ಕುಡಿ ಯಾಡನೊಡನೆ ಗಂಡನ ಮನೆಗೆ ಪಾಲಿಗಾಗಿ ಬರುವಳು. ಆಗ ಬಾವ ಬಸಪ್ಪಸೋಮಿ, ಮೈದುನ ಸಿದ್ದೂರರು ಕುಪಿತರಾಗಿ ಅವಳನ್ನು ಗೋಮಾಳದಲ್ಲಿ ಬಿಸುಡುವರು. ಬಿಸುಟಲ್ಲೇ ನೆಲೆಯಾದ ಅಕ್ಕಮಹಾದೇವಮ್ಮನ ಸುತ್ತ ಒಂದು ಜೋಪಡಿ ಎದ್ದು ಮುಂದೆ ಯಾಡ ಬೆಳೆದಂತೆ ಅವನ ಸಾಮರ್ಥ್ಯವೂ ಸೇರಿ ಆ ಜೋಪಡಿಯು ನಿಧಾನವಾಗಿ ಒಂದು ದೊಡ್ಡ ಮನೆಯಾಗಿ ಆ ದೊಡ್ಡಮನೆಗೆ ಕಾಲಾನುಕ್ರಮದಲ್ಲಿ ಬಸಪ್ಪಸೋಮಿ ಸಿದ್ದೂರರ ಹಟ್ಟಿಯೇ ದನದ ಕೊಟ್ಟಿಗೆ ಆಗುವುದು. ಈ ಯಾಡೇಗೌಡನ ಮಗ ಸೋಮಪ್ಪ ಊರಿಗೆ ದೊಡ್ಡವರು. ಈ ಊರಿಗೆ ದೊಡ್ಡವರ ಮಗಳು ಕುಸುಮಬಾಲೆ. ಕುಸುಮ ಮತ್ತು ಹೊಲಾರ ಚನ್ನರ ನಡುವಿನ ಗುಪ್ತ ಸಂಬಂಧವು ಕುಸುಮಳಿಗಾದ ಮಗುವಿನಿಂದಾಗಿ ಬಯಲಾಗಿ ಅರಿವಾಗದೋಪಾದಿಯಲ್ಲಿ ಚೆನ್ನನ ಕೊಲೆಯಾಗುವುದು.

ಇತ್ತ ಇಡೀ ಊರಿಗೆ ಊರೇ ಕಿಚ್ಚು ಹಾಯಿಸೋ ಹಬ್ಬಕ್ಕೆ ಸಿದ್ಧವಾಗುತ್ತಿದ್ದರೆ, ಚನ್ನನ ಬಳಗಕ್ಕೆ ಸೇರಿದ ಕೆಂಪಿಗೆ ಹುಟ್ಟಿದ ಕಂದನನ್ನು ಬದುಕಿಸಲು ತಾಯಿ ತೂರಮ್ಮ ವಿದಿsಯೊಡನೆ ಸೆಣಸುತ್ತ, ಅಲ್ಲೇ ತೂರಮ್ಮನ ಅಕ್ಕನ ಮಗಳು ಈರಿಯು ತನ್ನ ಸವೆಯುತ್ತಿದ್ದ ಕಂದನನ್ನು ಉಳಿಸಿಕೊಳ್ಳಲು ವಿಫಲಳಾಗಿ ಹಾಗೂ ಚೆನ್ನನ ಕೊಲೆ ಅರಿಯದ ಬಳಗವು ಕಾಯುವುದು ಚೆನ್ನನ ಬರುವಿಗಾಗಿ.

ಎತ್ತಣ ಮಾಮರ ಎತ್ತಣ ಕೋಗಿಲೆ? ಎತ್ತಣಿಂದೆತ್ತ ಸಂಬಂಧವಯ್ಯ?!
ಬೆಟ್ಟದ ನೆಲ್ಲಿಯಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ?!
ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯ?!
-ಅಲ್ಲಮ