ಅಂಗಳ

ನಮ್ಮ ಮಹಾದೇವರ ಮನಸು,         

 ತುಡಿದದ್ದು, ಒಲಿದದ್ದು, ಕಂಡದ್ದು, ಆಡಿದ್ದು, ಒಡಮೂಡಿಸಿದ್ದು, ಕನಸಿದ್ದು…….ಬೇಕೆಂದಾಗ ನಮ್ಮ ಎಟುಕಿಗೆ ನಿಲುಕುವಂತಾಗಲು ಈ ಜಾಲತಾಣ ರೂಪುಗೊಳ್ಳುತ್ತಿದೆ. ಆದರೆ ನಮಗೆನಿಸುವಂತೆ……ಎಷ್ಟು ತುಂಬಿದರೂ ಇನ್ನೂ…… ಮಿಕ್ಕಿಯೇ ಇರುತ್ತದೆ ಈ ಜಾಲ ಮತ್ತು ಎಷ್ಟು ಮೊಗೆದರೂ ಖಾಲಿಯೇ ಆಗದು ಈ ಜೀವ. ಇದೊಂದು ನೆರಳು ಹಿಡಿಯುವ ಆಟ!

‘ಸಹಪಯಣ’.

  ಈ ನೆಲದ ತುಡಿತ ತಲ್ಲಣ ಕನಸುಗಳಿಗೆ ಸ್ಪಂದಿಸುವ…  ದನಿ ಕೊಡುವ ಕನಸುಳ್ಳ ವೇದಿಕೆ ‘ಸಹಪಯಣ’……
  26 ಜನವರಿ 2015ರ ಗಣರಾಜ್ಯೋತ್ಸವ ದಿನದಿಂದ ಪ್ರಾರಂಭವಾಗಿ ಈಗ ಐದು ವರ್ಷ  ಪೂರೈಸಿದೆ. ಈ ಯಾನದಲ್ಲಿ ಜೊತೆಯಾಗಿ ತಮ್ಮ ಲೇಖನ ನೀಡಿ ಸಹಕರಿಸಿದ ಬರಹಗಾರರಿಗೆ ವಂದನೆಗಳು. ನೀವೂ ಈ ಪಯಣದಲ್ಲಿ ಜೊತೆಯಾಗಿ….

-ಬನವಾಸಿಗರು.

ನಮ್ಮ ಬನವಾಸಿ ಎಂಬ ದೇವನೂರ ಮಹಾದೇವ ಅವರ ಕುರಿತ ಈ ಜಾಲತಾಣ  ಕುವೆಂಪು ಜನ್ಮ ದಿನವಾದ 29.12.2014 ರಂದು ಆರಂಭವಾಗಿ, ಈಗ ಆರು  ವರ್ಷ ಪೂರೈಸಿತು. ಯಾವ ಪೂರ್ವಗ್ರಹ ಮತ್ತು ವೈಭವೀಕರಣವಿಲ್ಲದೆ, ಅವರ ಚಿಂತನೆ, ಮನಸು, ಧಾರಣಶಕ್ತಿಯನ್ನು ಯಥಾವತ್ತಾಗಿ ದಾಖಲಿಸುವುದನ್ನು  ಕೇಂದ್ರಿಕರಿಸಿ ಈ ಜಾಲತಾಣ ಮುಂದುವರೆಯುತ್ತಿದೆ.   ನಾವಿನ್ನೂ ಅರ್ಧದಷ್ಟೂ ಯಶಸ್ವಿಯಾಗಿಲ್ಲವೆಂಬುದು ನಮ್ಮ ವಿನಮ್ರ ನಂಬಿಕೆ.

ನಮ್ಮ ಬನವಾಸಿ ಎಂಬುದೇ ಈ ನಮ್ಮ ನಾಡಿನ ಸಮಸ್ತ  ಚಲನೆಗೂ ಸಂಬಂಧಿಸಿದುದರ ಸೂಚಕ.  ಹೀಗೆಂದೇ   ಕಾಲದ ಚಲನೆಯ ಜೊತೆಗೆ, ವ್ಯಕ್ತಿ ಕೇಂದ್ರಿತವಾಗದೆ ಸಮಷ್ಟಿಯನ್ನು ಒಳಗೊಳ್ಳುವ ಕಡೆಗೆ ಈ ಜಾಲತಾಣ ತುಡಿಯುತ್ತಿದೆ. ಆರೋಗ್ಯಕರ ದಾರಿಯಲ್ಲಿ ಹೆಜ್ಜೆಗಳನ್ನಿಡಲು  ಸಾಧ್ಯವಾದಷ್ಟು  ನಿಮ್ಮ  ಸಲಹೆ ಸೂಚನೆಗಳನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ.

ಈಗಾಗಲೇ ಅನೇಕರು ನಮ್ಮ ಬನವಾಸಿಗೆ ಮಹಾದೇವರ ಕುರಿತು ತಮ್ಮಲ್ಲಿರುವ ಅಮೂಲ್ಯವಾದುದನೆಲ್ಲಾ ಕೊಟ್ಟಿದ್ದಾರೆ. ಅವರ ಪ್ರೀತಿಯ ಕೊಡುಗೆಯಿಂದ ನಮ್ಮ ಬನವಾಸಿಯ ಮೌಲ್ಯ ಮತ್ತು ಸೊಬಗು ಹೆಚ್ಚಿದೆ. ಅಂತಹ ಉದಾರ ಮನಸುಗಳಿಗೆ, ಸಂಸ್ಥೆಗಳಿಗೆ, ಪತ್ರಿಕೆಯವರಿಗೆ, ಫೋಟೋಗ್ರಾಫರ್ ಗಳಿಗೆ  ನಮ್ಮ ಹೃದಯಪೂರ್ವಕ ಪ್ರಣಾಮಗಳು. ಹಳೆಯ ಅಪರೂಪವಾದ ಅತ್ಯಮೂಲ್ಯ ಭಾವಚಿತ್ರಗಳನ್ನು ತಮ್ಮ ಸಂಗ್ರಹದಿಂದ ನೀಡಿದ ಪ್ರಜಾವಾಣಿ ಸಂಪಾದಕೀಯ ಬಳಗಕ್ಕೆ, ಕುಟುಂಬದ ಆಪ್ತರಿಗೆ ನಮ್ಮ ವಿಶೇಷ ಕೃತಜ್ಞತೆಗಳು.
ಮಹಾದೇವರ ಕುರಿತು ನಿಮ್ಮಲ್ಲಿ ಇರಬಹುದಾದ ವಿಶೇಷವಾದುದನ್ನು ಪ್ರೀತಿಯಿಂದ ನೀಡಿದರೆ ನಮ್ಮ ಬನವಾಸಿಯ ಮೌಲ್ಯ ಹೆಚ್ಚುತ್ತದೆ. ಈ ಜಾಲತಾಣ ಎಲ್ಲರದ್ದೂ ಆದ್ದರಿಂದ ನಾವೆಲ್ಲರೂ ಸೇರಿ ಅದರ ಸೊಬಗನ್ನು ಹೆಚ್ಚಿಸೋಣವೆಂದು  ಮನವಿ ಮಾಡುತ್ತಿದ್ದೇವೆ. ಉದಾರವಾಗಿ ನೀಡುವ ಕೈಗಳಿಗೆ ನಮ್ಮ ಮನಃಪೂರ್ವಕ ವಂದನೆಗಳು.  ಎಂದಿನಂತೆ ನಿಮ್ಮ ಸಲಹೆ, ವಿಶ್ವಾಸದ ನಿರೀಕ್ಷೆಯಲ್ಲಿ…..

-ಬನವಾಸಿಗರು.

ನಮ್ಮ ವಿಳಾಸ: nammabanavasi@gmail.com 

ವಿ. ಸೂ -ಮಹಾದೇವರ ಕೃತಿಗಳನ್ನು ಹೊರತುಪಡಿಸಿ ಇಲ್ಲಿರುವ ಇನ್ನಿತರ ಯಾವುದೇ ದಾಖಲೆಗಳನ್ನು ಸಂಬಂಧಪಟ್ಟವರ ಪೂರ್ವಾನುಮತಿಯಿಲ್ಲದೆ ನಕಲು ಮಾಡಿಕೊಳ್ಳಬಾರದೆಂದು ವಿನಮ್ರವಾಗಿ ನಿವೇದಿಸುತ್ತೇವೆ.